+91 94487 53991    +91 86606 36951    barahagararaprakashakarasangha@gmail.com

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ (ರಿ.)

ಸಾಧನೆಗಳು

ಸಂಘದ ಪ್ರಯತ್ನದ ಫಲ :

  1. ಕರ್ನಾಟಕ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿನ ಪುಸ್ತಕ ಆಯ್ಕೆ ಮತ್ತು ಖರೀದಿ ಬಗ್ಗೆ ಸಮಗ್ರವಾದ ನೀತಿಯೊಂದನ್ನು ಸರ್ಕಾರದಿಂದ ದಿನಾಂಕ : 07-02-2005ರಂದು ಪ್ರಕಟಿಸುವಲ್ಲಿ ಸಫಲರಾಗಿದ್ದೇವೆ.
  2. ದಿನಾಂಕ : 01-04-2018ರಿಂದ ಪುಸ್ತಕಗಳ ಪುಟವಾರು ಬೆಲೆ ನಿಗದಿ ಆದೇಶ ಹೊರಡಿಸುವಲ್ಲಿ ಸಫಲರಾಗಿದ್ದೇವೆ.
  3. ಕನ್ನಡ ಪುಸ್ತಕಗಳಿಗೆ ಬೆಲೆ ನಿಗದಿಪಡಿಸುವಂತೆಯೇ ಇಂಗ್ಲಿಷ್ ಮತ್ತು ಇತರ ಭಾಷೆಯ ಪುಸ್ತಕಗಳಿಗೂ ಬೆಲೆ ನಿಗದಿಪಡಿಸಲು ಸರ್ಕಾರದಿಂದ ಆದೇಶ ಹೊರಡಿಸುವಲ್ಲಿ ಸಫಲರಾಗಿದ್ದೇವೆ.
  4. ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿನ ವಾರ್ಷಿಕ ಪುಸ್ತಕ ಖರೀದಿ ಮಿತಿಯನ್ನು 2.5ಲಕ್ಷಕ್ಕೆ ಹೆಚ್ಚಿಸುವಲ್ಲಿ ಯಶಿಸಿಯಾಗಿದ್ದೇವೆ.
  5. ಸರ್ಕಾರದಿಂದ ಸಂಘಕ್ಕೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿನ ಉನ್ನತ ಮಟ್ಟದ ಪುಸ್ತಕ ಆಯ್ಕೆ ಸಮಿತಿಗೆ ಸದಸ್ಯರಾಗಿ ಪ್ರಾತಿನಿಧ್ಯ ದೊರೆತಿದೆ.
  6. ಆದಾಯ ತೆರಿಗೆ ಇಲಾಖೆಯಿಂದ ಸಂಘದ ಧ್ಯೇಯೋದ್ದೇಶಕ್ಕಾಗಿ 2021-22ರಿಂದ ಸಂಗ್ರಹಿಸುವ ವಂತಿಕೆ ಹಣದ ಮೇಲೆ 12ಎಎ ಹಾಗೂ 80 ಜಿ ಸೆಕ್ಷನ್ ಮೇಲೆ ಆದಾಯ ತೆರಿಗೆ ವಿನಾಯಿತಿ ಪಡೆಯುವಲ್ಲಿ ಸಫಲರಾಗಿದ್ದೇವೆ. ಸಫಲರಾಗಿದ್ದೇವೆ.
  7. ನಮ್ಮ ಸಂಘದ ಮನವಿಯ ಮೇರೆಗೆ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು 2023 – 2024 ನೇ ಸಾಲಿನ ಬಜೆಟ್ ನಲ್ಲಿ ಕನ್ನಡ ಪುಸ್ತಕಗಳ ಸಗಟು ಖರೀದಿಗಾಗಿ ಹತ್ತು ಕೋಟಿ ರೂಪಾಯಿಗಳನ್ನು ಮೀಸಲಿಟ್ಟು ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಇತಿಹಾಸ ನಿರ್ಮಾಣ ಮಾಡಿದ್ದಾರೆ. ಅದಕ್ಕಾಗಿ ಸನ್ಮಾನ್ಯ ಮುಖ್ಯಮಂತ್ರಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ.

ನಿರಂತರ ಪ್ರಯತ್ನ

ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರನ್ನು ಸಂಘದ ನಿಯೋಗ ಭೇಟಿಯಾಗಿ ಚರ್ಚಿಸಿದ್ದು ಹಾಗೂ ಸಂಘದ ಸಮಾರಂಭದಲ್ಲಿ ಭಾಗವಹಿಸಿದ್ದ ಚಿತ್ರಗಳು.

ಶಿಕ್ಷಣ ಸಚಿವರನ್ನು ಭೇಟಿಯಾಗಿ ಪುಸ್ತಕೋದ್ಯಮದ ಸಮಸ್ಯಗಳ ಬಗ್ಗೆ ಚರ್ಚಿಸುತ್ತಿರುವುದು.

ವಿವಿಧ ಲೇಖಕರ ಕೃತಿಗಳು ಹಾಗೂ ೨೦೨೪ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜ್ ಸಭಾಂಗಣದಲ್ಲಿ ದಿನಾಂಕ: ೨೩-೧೨-೨೦೨೩ರಂದು ನಡೆಯಿತು.

ದಿನಾಂಕ: 29-12-2022ರಂದು ಸಪ್ನ ಬುಕ್ ಹೌಸ್ ಕಾರ್ಯಾಲಯದಲ್ಲಿ ಹಾಲಿ ಗೌರವಾನ್ವಿತ ಗೃಹ ಸಚಿವರಾಗಿರುವ ಸನ್ಮಾನ್ಯ ಡಾ.ಜಿ ಪರಮೇಶ್ವರ್ ಅವರ ಕರೆಯ ಮೇರೆಗೆ ಸಂಘದ ನಿಯೋಗವು ಭೇಟಿಯಾಗಿ ಪಕ್ಷದ ಕಾರ್ಯಸೂಚಿಯಲ್ಲಿ ಪುಸ್ತಕೋದ್ಯಮದ ಅಭಿವೃದ್ಧಿ ಬಗ್ಗೆ ಆಗಬೇಕಾದ ಕಾರ್ಯದ ಬಗ್ಗೆ ಮನವಿ ಸಲ್ಲಿಸಿ ಚರ್ಚಿಸಿದ ಕ್ಷಣ