ಅಧ್ಯಕ್ಷರು
ಕಾರ್ಯದರ್ಶಿ
ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ದಿನಾಂಕ: 01-11-2003ರಿಂದ ಅಸ್ತಿತ್ವಕ್ಕೆ ಬಂದಿದ್ದು, ನಿಯಮಾನುಸಾರ ನೋಂದಣಿಯಾಗಿರುತ್ತದೆ. ನವದೆಹಲಿಯ ದಿ ಫೆಡರೇಷನ್ ಆಫ್ ಪಬ್ಲಿಷರ್ಸ್ ಅಂಡ್ ಬುಕ್ ಸೆಲ್ಲರ್ಸ್ ಅಸೋಸಿಯೇಷನ್ಸ್ ಇನ್ ಇಂಡಿಯಾ ಹಾಗೂ ಬೆಂಗಳೂರು ಬುಕ್ ಸೆಲ್ಲರ್ಸ್ ಅಂಡ್ ಪಬ್ಲೀಷರ್ಸ್ ಅಸೋಸಿಯೇಷನ್ಸ್‍ನ ಸದಸ್ಯತ್ವವನ್ನು ಹೊಂದಿರುತ್ತದೆ. ಉತ್ಸಾಹಿ, ಕ್ರಿಯಾಶೀಲ, ಸಮಾನ ಮನಸ್ಕ ಬರಹಗಾರರು ಮತ್ತು ಪ್ರಕಾಶಕರ ಸಂಘಟಿತ ಸಂಸ್ಥೆ ಈ ಸಂಘ. ಕನ್ನಡ ಪುಸ್ತಕೋದ್ಯಮದ ಸರ್ವತೋಮುಖ ಅಭಿವೃದ್ಧಿ ಹಾಗೂ ಪುಸ್ತಕ ಓದುವ ಅಭಿರುಚಿಯನ್ನು ಮಕ್ಕಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಬೆಳೆಸುವ ಮೂಲಕ ಪುಸ್ತಕ ಸಂಸ್ಕೃತಿಗೆ ಸಹಕಾರಿಯಾಗುವಂತಹ ಹಲವು ಉದ್ದೇಶಗಳೊಂದಿಗೆ ಈ ಸಂಘವನ್ನು ಸ್ಥಾಪಿಸಿ, ಕಳೆದ 18 ವರ್ಷಗಳಿಂದ ಅನೇಕ ಮಹನೀಯರ ಸಹಕಾರದೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದೇವೆ.
ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿನ ಪುಸ್ತಕ ಆಯ್ಕೆ ಮತ್ತು ಖರೀದಿ ಪ್ರಕ್ರಿಯೆಯಲ್ಲಿನ ನ್ಯೂನತೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತಾ ಲೇಖಕ/ಲೇಖಕ-ಪ್ರಕಾಶಕ/ ಪ್ರಕಾಶಕ/ಓದುಗ ಮತ್ತು ಇಲಾಖೆಯ ನಡುವೆ ಸೇತುವೆಯಾಗಿ ಸಾಮರಸ್ಯದಿಂದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುತ್ತಾ, ಪುಸ್ತಕೋದ್ಯಮವನ್ನೇ ನಂಬಿ, ಪುಸ್ತಕ ಪ್ರಕಟಿಸಿ, ಸಂಕಷ್ಟಕ್ಕೆ ಸಿಲುಕುತ್ತಿರುವ ಸಾವಿರಾರು ಕುಟುಂಬಗಳಿಗೆ ಧೈರ್ಯ ತುಂಬಿ, ಅವರ ಆತಂಕವನ್ನು ದೂರ ಮಾಡುವ ಕೆಲಸವನ್ನು ಕನ್ನಡದ ಹಿರಿಯ-ಕಿರಿಯ ಲೇಖಕರ, ಪ್ರಕಾಶಕರ ಸಹಕಾರ ಹಾಗೂ ಬೆಂಬಲದಿಂದ ನಿರ್ವಹಿಸುತ್ತಾ ಸಂಘವು ಮುಂದೆ ಸಾಗಿದೆ.
ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ (ರಿ.)
ನಂ.56/1-6, ನರಸಿಂಹಯ್ಯ ಗಾರ್ಡನ್,
ಕೊಟ್ಟಿಗೆಪಾಳ್ಯ, ಮಾಗಡಿ ಮುಖ್ಯ ರಸ್ತೆ,
ಬೆಂಗಳೂರು – 560091.
ದೂರವಾಣಿ : 9448753991 / 8660636951 / 9845201537
ಮಿಂಚಂಚೆ :
barahagararaprakashakarasangha@gmail.com
Copyright © 2023 ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ (ರಿ.) Designed by VIKIMEDIATEC PRIVATE LIMITED