+91 94487 53991    +91 86606 36951    barahagararaprakashakarasangha@gmail.com

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ (ರಿ.)

ವಾರ್ಷಿಕ ಪ್ರಶಸ್ತಿಗಳು

ವಾರ್ಷಿಕ ಪ್ರಶಸ್ತಿ -2005

‘ವರ್ಷದ ಲೇಖಕ’ ಮತ್ತು ‘ವರ್ಷದ ಪ್ರಕಾಶಕ’ ಪ್ರಶಸ್ತಿ ಪತ್ರ, ಫಲಕ ಹಾಗೂ ಇಪ್ಪತ್ತು ಸಾವಿರ ನಗದು ಪುರಸ್ಕಾರವನ್ನು ನೀಡುವ ಮೂಲಕ ಬರಹಗಾರರು ಉತ್ತಮ ಕೃತಿ ರಚಿಸಲು ಹಾಗೂ ಪ್ರಕಾಶಕರು ಉತ್ತಮ ಗುಣಮಟ್ಟದ, ಕನಿಷ್ಠ ಬೆಲೆಯಲ್ಲಿ ಪುಸ್ತಕ ಪ್ರಕಟಿಸಲು ಪ್ರೋತ್ಸಾಹದಾಯಕ ಯೋಜನೆಯನ್ನು ಕಾರ್ಯರೂಪಕ್ಕೆ ತಂದು, 2003ನೇ ಸಾಲಿನ ಬರಹ ಮತ್ತು ಪ್ರಕಟಣೆಯನ್ನು ಪರಿಗಣಿಸಿ ‘ವರ್ಷದ ಲೇಖಕ’ ಪ್ರಶಸ್ತಿಗೆ ಹಿರಿಯ ಲೇಖಕರಾದ ಶ್ರೀ ಶೇಷನಾರಾಯಣ ಅವರಿಗೂ ಹಾಗೂ ಅಂಕೋಲಾದ, ಶ್ರೀ ರಾಘವೇಂದ್ರ ಪ್ರಕಾಶನದ ಪ್ರಕಾಶಕರಾದ ಶ್ರೀ ವಿಷ್ಣು ನಾಯ್ಕ ಅವರಿಗೆ ‘ವರ್ಷದ ಪ್ರಕಾಶಕ’ ಪ್ರಶಸ್ತಿ, ಫಲಕ ಹಾಗೂ ನಗದು ಪುರಸ್ಕಾರವನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಯು.ಆರ್. ಅನಂತಮೂರ್ತಿ ಅವರ ಅಧ್ಯಕ್ಷತೆಯಲ್ಲಿ, ಖ್ಯಾತ ಸಾಹಿತಿಗಳಾದ ಪ್ರೊ. ಬರಗೂರು ರಾಮಚಂದ್ರಪ್ಪ, ಸರ್ಕಾರದ ಕಾರ್ಯದರ್ಶಿಗಳಾದ ಶ್ರೀ ತ.ಮ. ವಿಜಯ ಭಾಸ್ಕರ್ ಹಾಗೂ ಪತ್ರಕರ್ತರಾದ ಶ್ರೀ ವಿಶ್ವೇಶ್ವರ ಭಟ್ ಇವರ ಉಪಸ್ಥಿತಿಯಲ್ಲಿ ದಿನಾಂಕ: 06-02-2005ರಂದು ಬೆಂಗಳೂರಿನ ಕರ್ನಾಟಕ ಸಚಿವಾಲಯ ಕ್ಲಬ್ ಸಭಾಂಗಣದಲ್ಲಿ ನೀಡಿ ಗೌರವಿಸಲಾಯಿತು.

ವಾರ್ಷಿಕ ಪ್ರಶಸ್ತಿ - 2006

2004ನೇ ಸಾಲಿನಲ್ಲಿ ‘ವರ್ಷದ ಲೇಖಕಿ’ ಪ್ರಶಸ್ತಿಯನ್ನು ನಾಡೋಜ ಶ್ರೀಮತಿ ಗೀತಾ ನಾಗಭೂಷಣ್ ಅವರಿಗೂ, ‘ವರ್ಷದ ಪ್ರಕಾಶಕ’ ಪ್ರಶಸ್ತಿಯನ್ನು ಬೆಂಗಳೂರಿನ ಗೀತಾ ಏಜೆನ್ಸಿಸ್ ಪ್ರಕಾಶಕರಾದ ಶ್ರೀ ಕೆ. ರಾಮಚಂದ್ರಯ್ಯನವರಿಗೆ ದಿನಾಂಕ: 23-01-2006ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ಹಿರಿಯ ಸಂಶೋಧಕರಾದ ಡಾ. ಎಂ. ಚಿದಾನಂದಮೂರ್ತಿಯವರ ಅಧ್ಯಕ್ಷತೆಯಲ್ಲಿ ಸಾಹಿತಿಗಳಾದ ಶ್ರೀ ಮನು ಬಳಿಗಾರ್ ಹಾಗೂ ಡಾ. ನಲ್ಲೂರು ಪ್ರಸಾದ್ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿ, ಫಲಕ ಹಾಗೂ ಹತ್ತು ಸಾವಿರ ರೂ. ನಗದು ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಹಿರಿಯರಾದ ಶ್ರೀ ಗೊ.ರು.ಚ. ಮತ್ತು ಹಿರಿಯ ಚಿತ್ರಕಲಾವಿದರಾದ ಶ್ರೀ ಚಂದ್ರನಾಥ್ ಆಚಾರ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಾರ್ಷಿಕ ಪ್ರಶಸ್ತಿ-2007

2006ನೇ ಸಾಲಿನ ‘ವರ್ಷದ ಲೇಖಕ’ ಪುರಸ್ಕಾರಕ್ಕಾಗಿ ಡಾ. ನಲ್ಲೂರು ಪ್ರಸಾದ್ ಅವರನ್ನು ಹಾಗೂ ‘ವರ್ಷದ ಪ್ರಕಾಶಕ’ ಪುರಸ್ಕಾರಕ್ಕಾಗಿ ಧಾರವಾಡದ ಮನೋಹರ ಗ್ರಂಥಮಾಲಾ ಪ್ರಕಾಶನ ಸಂಸ್ಥೆಯ ಡಾ. ರಮಾಕಾಂತ ಜೋಶಿಯವರನ್ನು ಆಯ್ಕೆ ಮಾಡಿ ನಾಡೋಜ ಡಾ. ಪಾಟಿಲ್ ಪುಟ್ಟಪ್ಪ ಅವರ ಅಧ್ಯಕ್ಷತೆಯಲ್ಲಿ, ರಾಷ್ಟ್ರಕವಿ ಡಾ. ಜಿ.ಎಸ್.ಎಸ್., ಹಿರಿಯ ವಿದ್ವಾಂಸರಾದ ಪ್ರೊ. ಜಿ. ವೆಂಕಟಸುಬ್ಬಯ್ಯ, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಮುಂತಾದವರ ಉಪಸ್ಥಿತಿಯಲ್ಲಿ ಪ್ರಶಸ್ತಿ, ಫಲಕ ನೀಡಿ ದಿನಾಂಕ 04-02-2007 ರಂದು ಗೌರವಿಸಲಾಯಿತು. ಸುವರ್ಣ ಕರ್ನಾಟಕದ ಸುಸಂದರ್ಭದಲ್ಲಿ ರಾಷ್ಟ್ರಪಕವಿ ಡಾ. ಜಿ.ಎಸ್. ಶಿವರುದ್ರಪ್ಪನವರನ್ನು ಅಭಿನಂದಿಸಿ ಸಂಘದಿಂದ ಗೌರವಿಸಿ ಸನ್ಮಾನಿಸಲಾಯಿತು.

ವಾರ್ಷಿಕ ಪ್ರಶಸ್ತಿ - 2016

ಹೇಮಂತ ವರ್ಷದ ಲೇಖಕ-2016 ಪ್ರಶಸ್ತಿಗೆ ಶ್ರೀ ಮಹಮದ್ ಕುಳಾಯಿಯವರ ‘ಕಾಡಂಕಲ್ ಮನೆ’ ಕಾದಂಬರಿಗೆ, ನಗದು ಪುರಸ್ಕಾರ ರೂ. 20,000/-, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ‘ವರ್ಷದ ಪ್ರಕಾಶಕ-2016’ ಪ್ರಶಸ್ತಿಗೆ ಬಳ್ಳಾರಿ ಜಿಲ್ಲೆಯ ಪಲ್ಲವ ಪ್ರಕಾಶನದ ಶ್ರೀಮತಿ ಎಂ. ರಾಜೇಶ್ವರಿ ವೆಂಕಟೇಶ್‌ರವರಿಗೆ ನಗದು ಪುರಸ್ಕಾರ ರೂ. 20,000/-, ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ‘ಸಂವಹನ – ವರ್ಷದ ಯುವ ಲೇಖಕ-2016’ ಪ್ರಶಸ್ತಿಗೆ ಶ್ರೀ ಸಂತೋಷ್, ಜಿ.ಆರ್. ಇವರ “ಧ್ವಜವೆಂದರೆ ಬಟ್ಟೆಯಲ್ಲ” ವಿಚಾರ ಸಾಹಿತ್ಯಕ್ಕೆ ನಗದು ಪುರಸ್ಕಾರ ರೂ. 10,000/-, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಮೇಲ್ಕಂಡ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕನ್ನಡ ಸಾಹಿತ್ಯ ಪರಿಷತ್‌ ಸಭಾಂಗಣದಲ್ಲಿ ದಿನಾಂಕ: 20-08- 2017ರಂದು ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಡಾ. ಸಿ.ಎಸ್. ದ್ವಾರಕಾನಾಥ್, ಹಿರಿಯ ನ್ಯಾಯವಾದಿಗಳು, ಡಾ. ಸತೀಶ್‌ ಕುಮಾರ್ ಹೊಸಮನಿ, ನಿರ್ದೇಶಕರು, ಸಾ.ಗ್ರಂ.ಇ. ಹಾಗೂ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ವಸುಂಧರಾ ಭೂಪತಿಯವರ ಉಪಸ್ಥಿತಿಯಲ್ಲಿ ನಡೆಸಲಾಯಿತು.
ವಾರ್ಷಿಕ ಪ್ರಶಸ್ತಿಗಳ ಪ್ರಾಯೋಜಕರಾದ ಶ್ರೀ ಡಿ.ಎನ್. ಲೋಕಪ್ಪ ಹಾಗೂ ಶ್ರೀ ಎಂ. ವೆಂಕಟೇಶ್ ಅವರನ್ನು ಅಭಿನಂದಿಸಲಾಯಿತು.

ವಾರ್ಷಿಕ ಪ್ರಶಸ್ತಿ - 2017

ಬೆಂಗಳೂರಿನ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ದಿನಾಂಕ : 23.12.2018ನೇ ಭಾನುವಾರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರ, ಅಧ್ಯಕ್ಷರು ಕೇಂದ್ರ ಸಾಹಿತ್ಯ ಅಕಾಡೆಮಿ ಇವರಿಂದ ಉದ್ಘಾಟನೆ ಹಾಗೂ ಡಾ. ಟಿ.ಎಸ್. ನಾಗಾಭರಣ, ಚಲನಚಿತ್ರ ನಿರ್ದೇಶಕರು ಇವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಡೆಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಲೇಖಕರ 10 ಕೃತಿಗಳನ್ನು ಲೋಕರ್ಪಣೆ ಮಾಡಲಾಯಿತು.
ಹೇಮಂತ- ವರ್ಷದ ಲೇಖಕ-2017 ಪ್ರಶಸ್ತಿಗೆ ಡಾ. ನಾ. ಮೊಗಸಾಲೆಯವರ ‘ಶರಣರ ನುಡಿಹೆಜ್ಜೆ, ನಡೆಗೆಜ್ಜೆ’ ಚಿಂತನಾ ಬರಹಗಳು ಆಯ್ಕೆಯಾಗಿ, ನಗದು ರೂ. 20,000/- ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಕಣ್ವ- ವರ್ಷದ ಪ್ರಕಾಶಕ-2017 ಪ್ರಶಸ್ತಿಗೆ ಶ್ರೀ ನ. ರವಿಕುಮಾರ್, ಅಭಿನವ ಪ್ರಕಾಶನ ಸಂಸ್ಥೆ ಆಯ್ಕೆಯಾಗಿ, ನಗದು ರೂ. 20,000/- ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಸಂವಹನ- ವರ್ಷದ ಯುವ ಬರಹಗಾರ-2017 ಪ್ರಶಸ್ತಿಗೆ ಶ್ರೀ ಆನಂದ ಈ ಕುಂಚನೂರು ಬರೆದ ‘ಪಾದಗಟ್ಟಿ’ ಕಥಾಸಂಕಲನ ಆಯ್ಕೆಯಾಗಿ ನಗದು ರೂ. 10,000/- ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ವಾರ್ಷಿಕ ಪ್ರಶಸ್ತಿ - 2018

ಮಂಡ್ಯ ನಗರದ ಕರ್ನಾಟಕ ಸಂಘದ ಕೆ.ವಿ. ಶಂಕರೇಗೌಡ ಶತಮಾನೋತ್ಸವ ಭವನದಲ್ಲಿ ದಿನಾಂಕ 25-10-2019ರಂದು ಗೌರವಾನ್ವಿತ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಸನ್ಮಾನ್ಯಶ್ರೀ ಎಸ್. ಸುರೇಶ್‌ ಕುಮಾರ್ ಅವರ ಅನುಪಸ್ಥಿತಿಯಲ್ಲಿ ಶಾಸಕರಾದ ಶ್ರೀ ಎಂ. ಶ್ರೀನಿವಾಸ್, ಮಾಜಿ ಪರಿಷತ್ ಸದಸ್ಯರಾದ ಶ್ರೀ ಹೆಚ್. ಹೊನ್ನಪ್ಪ, ಸಿಇಓ ಶ್ರೀ ಯಾಲಕ್ಕಿಗೌಡ ಸಾಹಿತಿ ಪ್ರೊ. ಜಯಪ್ರಕಾಶ್‌ಗೌಡ, ಡಿಡಿಪಿಐ ಶ್ರೀ ರಘುನಂದನ್ ಇವರ ಉಪಸ್ಥಿತಿಯಲ್ಲಿ 2018ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.
 ಹೇಮಂತ-ವರ್ಷದ ಲೇಖಕ-2018 ಪ್ರಶಸ್ತಿಗೆ ಶ್ರೀ ಎಸ್. ಗಂಗಾಧರಯ್ಯನವರ ‘ದೇವರ ಕುದುರೆ’ ಕಥಾಸಂಕಲನ ಆಯ್ಕೆಯಾಗಿ ನಗದು ರೂ. 20,000/- ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಸಂವಹನ-ವರ್ಷದ ಯುವ ಲೇಖಕ-2018 ಪ್ರಶಸ್ತಿಗೆ ಶ್ರೀ ಫಕೀರ (ಶ್ರೀಧರ ಬನವಾಸಿ) ಬರೆದ ‘ವೃಕ್ಷಮಾತೆ ತಿಮ್ಮಕ್ಕ’ ಕೃತಿ ಆಯ್ಕೆಯಾಗಿ ನಗದು ರೂ.10,000/-, ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಕಣ್ವ-ವರ್ಷದ ಪ್ರಕಾಶಕ-2018 ಪ್ರಶಸ್ತಿಗೆ ಮೈಸೂರಿನ ಭಾರತಿ ಪ್ರಕಾಶನದ ಶ್ರೀ ಬಿ.ಎನ್. ಶ್ರೀನಿವಾಸ್ ಆಯ್ಕೆಯಾಗಿ ನಗದು ರೂ. 20,000/-, ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ವಾರ್ಷಿಕ ಪ್ರಶಸ್ತಿ - 2019

ಬೆಂಗಳೂರಿನ ಕನ್ನಡ ಭವನದಲ್ಲಿರುವ ನಯನ ಸಭಾಂಗಣದಲ್ಲಿ ದಿನಾಂಕ : 20-02-2021 ರಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ, ವಿಶ್ರಾಂತ ಸಂ.ವಿ.ವಿ.ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಹಾಗೂ ಹಿರಿಯ ಪತ್ರಕರ್ತರಾದ ಸಂಸ್ಕೃತಿ ಚಿಂತಕರಾದ ಡಾ.ವಿಜಯಮ್ಮನವರ ಉಪಸ್ಥಿತಿಯಲ್ಲಿ 2019ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಿತು.
ಹೇಮಂತ ವರ್ಷದ ಲೇಖಕ—2019 ಪ್ರಶಸ್ತಿಗೆ ಡಾ.ಸಿ. ಚಂದ್ರಪ್ಪನವರ ‘ಮಹಾಮಾನವನ ಮಹಾಯಾನ’ ಕೃತಿ ಆಯ್ಕೆಯಾಗಿ ರೂ. 10,000/- ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಸಪ್ನ ವರ್ಷದ ಯುವ ಲೇಖಕ-2019 ಪ್ರಶಸ್ತಿಗೆ ಶ್ರೀ ಕಪಿಲ.ಪಿ.ಹು ಮನಾಬಾದೆ ಬರೆದ ‘ಹಾಣಾದಿ’ ಕೃತಿ ಆಯ್ಕೆಯಾಗಿ ರೂ. 10,000/- ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಕಣ್ವ – ವರ್ಷದ ಪ್ರಕಾಶಕ – 2019 ಪ್ರಶಸ್ತಿಗೆ ಬೆಂಗಳೂರಿನ ಅಂಕಿತ ಪುಸ್ತಕದ ಶ್ರೀ ಪ್ರಕಾಶ್ ಕಂಬತ್ತಳ್ಳಿಯವರು ಆಯ್ಕೆಯಾಗಿ ರೂ. 10.000/- ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ವಾರ್ಷಿಕ ಪ್ರಶಸ್ತಿ - 2020

ಬೆಂಗಳೂರಿನ ಗಾಂಧಿ ಭವನದಲ್ಲಿ ದಿನಾಂಕ : 18-12-2021 ರಂದು ಸರ್ಕಾರದ ಶಿಕ್ಷಣ ಸಚಿವರಾದ ಸನ್ಮಾನ್ಯ ಶ್ರೀ ಬಿ.ಸಿ. ನಾಗೇಶ್, ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್, ಡಾ.ಸಿ.ಸೋಮಶೇಖರ್ ಇವರ ಉಪಸ್ಥಿತಿಯಲ್ಲಿ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳಾದ ‘ಸಾಹಿತ್ಯ ರತ್ನ’, ‘ಯುವ ಸಾಹಿತ್ಯ ರತ್ನ’, ‘ಪುಸ್ತಕ ರತ್ನ’ ಹಾಗೂ ‘ಮುದ್ರಣ ರತ್ನ’ (ಮರು ನಾಮಕರಣ ಮಾಡಿ) ಪ್ರಶಸ್ತಿ ಪ್ರದಾನ ಮಾಡಲಾಯಿತು.
‘ಸಾಹಿತ್ಯ ರತ್ನ ಪ್ರಶಸ್ತಿ – 2020 ‘ಶ್ರೀ ಜೋಗಿಯವರ 108- ನಾಲ್ಕು ದಶಕದ ಕಥೆಗಳು’ ಕೃತಿಗೆ ರೂ. 10.000/- ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ
ಗೌರವಿಸಲಾಯಿತು.
‘ಯುವ ಸಾಹಿತ್ಯ ರತ್ನ ಪ್ರಶಸ್ತಿ—2020’ – ಶ್ರೀಮತಿ ಮಂಜುಳಾ ಹಿರೇಮಠ ಅವರ ‘ಗಾಯಗೊಂಡವರಿಗೆ (ಕಾವ್ಯ)’ ಕೃತಿಗೆ ರೂ. 10,000/- ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
‘ಪುಸ್ತಕ ರತ್ನ ಪ್ರಶಸ್ತಿ – 2020’ ಬಹುರೂಪಿ ಪ್ರಕಾಶನದ ಶ್ರೀ ಜಿ.ಎನ್. ಮೋಹನ್ ಅವರಿಗೆ ರೂ.10,000/- ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ‘ಮುದ್ರಣ ರತ್ನ ಪ್ರಶಸ್ತಿ – 2020’ ‘ಶ್ರೀ ಬಿ.ಆರ್.ಅಶೋಕ್‌ ಕುಮಾರ್, ಲಕ್ಷ್ಮೀ ಮುದ್ರಣಾಲಯ ಇವರಿಗೆ 10,000/- ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ವಾರ್ಷಿಕ ಪ್ರಶಸ್ತಿ - 2021

ಬೆಂಗಳೂರಿನ ಬಾಪೂ ಸಭಾಂಗಣ, ಗಾಂಧಿಭವನದಲ್ಲಿ ದಿನಾಂಕ :30-07-2022 ರಂದು ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್, ಸಂಪಾದಕರಾದ ಶ್ರೀ ರವೀಂದ್ರಭಟ್, ನಾಡೋಜ ಡಾ. ವೂಡೇ ಪಿ.ಕೃಷ್ಣ, ಶ್ರೀ ಜೀರಿಗೆ ಲೋಕೇಶ್ ಇವರ ಉಪಸ್ಥಿತಿಯಲ್ಲಿ 2021 ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
‘ಸಾಹಿತ್ಯ ರತ್ನ ಪ್ರಶಸ್ತಿ – 2021’ ಡಾ.ಗಜಾನನ ಶರ್ಮ ಅವರ ‘ಚನ್ನಬೈರಾದೇವಿ’ ಕೃತಿಗೆ ರೂ. 10,000/- ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
‘ಯುವ ಸಾಹಿತ್ಯ ರತ್ನ ಪ್ರಶಸ್ತಿ 2021’ ಡಾ.ಶರಣು ಹುಲ್ಲೂರ್ ಅವರ ‘ಅನಂತವಾಗಿರು’ ಕೃತಿಗೆ ರೂ.10,000/- ನಗದು, ಸ್ಮರಣಿಕೆ ಪ್ರಶಸ್ತಿ ಪತ್ರ ಗೌರವಿಸಲಾಯಿತು.
‘ಪುಸ್ತಕ ರತ್ನ ಪ್ರಶಸ್ತಿ 2021’ ಸಾವಣ್ಣ ಪ್ರಕಾಶನದ ಶ್ರೀ ಜಮೀಲ್ ಸಾವಣ್ಣನವರಿಗೆ ರೂ. 10,000/- ನಗದು ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ
ಗೌರವಿಸಲಾಯಿತು.
‘ಮುದ್ರಣ ರತ್ನ ಪ್ರಶಸ್ತಿ 2021’ ಇಳಾ ಮುದ್ರಣಾಲಯದ ಡಾ.ವಿಜಯಮ್ಮನವರಿಗೆ ರೂ. 10,000/- ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ವಾರ್ಷಿಕ ಪ್ರಶಸ್ತಿ - 2022

ಬೆಂಗಳೂರಿನ ಕುಮಾರಪಾರ್ಕ್ ಪೂರ್ವದಲ್ಲಿರುವ ಗಾಂಧಿ ಭವನದ “ಮಹಾದೇವ ದೇಸಾಯಿ ಸಭಾಂಗಣದಲ್ಲಿ ದಿನಾಂಕ : 24.06.2023ರಂದು ರಾಜ್ಯದ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು, ನಾಡೋಜ ಡಾ.ಹಂಪ ನಾಗರಾಜಯ್ಯ, ಹಂಪಿ ಕನ್ನಡ ವಿ.ವಿ. ವಿಶ್ರಾಂತ ಕುಲಪತಿಗಳಾದ ಡಾ.ಮಲ್ಲಿಕಾ ಘಂಟಿ ಇವರ ಉಪಸ್ಥಿತಿಯಲ್ಲಿ ಏರ್ಪಡಿಸಲಾಗಿತ್ತು.
‘ಸಾಹಿತ್ಯ ರತ್ನ ಪ್ರಶಸ್ತಿ – 2022’ ಗುಲ್ಬರ್ಗಾದ ಡಾ.ಪಿ.ಎಸ್.ಶಂಕರ್ ಅವರ ‘ವೈದ್ಯ ನಿನಗೆ ನಮೋ’ ಕೃತಿಗೆ ರೂ. 10,000/- ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
‘ಯುವ ಸಾಹಿತ್ಯ ರತ್ನ ಪ್ರಶಸ್ತಿ – 2022’ ಹಾಸನ ಜಿಲ್ಲೆಯ ಶ್ರೀ ಕೌಶಿಕ್ ಕೂಡುರಸ್ತೆ ಇವರ ‘ಒಂದು ಕೋಪಿಯ ಕಥೆ’ ಕೃತಿಗೆ ರೂ. 10,000/- ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
‘ಪುಸ್ತಕ ರತ್ನ ಪ್ರಶಸ್ತಿ – 2022’ ಮೈಸೂರಿನ, ಪುಸ್ತಕ ಪ್ರಕಾಶನದ ಪ್ರೊ.ಬಿ.ಎನ್. ಶ್ರೀರಾಮ್ ಇವರಿಗೆ ರೂ. 10,000/- ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
‘ಮುದ್ರಣ ರತ್ನ ಪ್ರಶಸ್ತಿ-2022’ ಮೈಸೂರು ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್ ಹೌಸ್‌ನ ಶ್ರೀ ಜಿ.ಹೆಚ್.ಕೃಷ್ಣಮೂರ್ತಿಯವರಿಗೆ ರೂ. 10,000/- ನಗದು, ಸ್ಮರಣಿಕೆ,ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ವಾರ್ಷಿಕ ಪ್ರಶಸ್ತಿ - 2023