+91 94487 53991    +91 86606 36951    barahagararaprakashakarasangha@gmail.com

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ (ರಿ.)

ನೂರು ಶಾಲೆಗಳಿಗೆ ನೂರು ನೂರು ಪುಸ್ತಕ

ಬೆಂಗಳೂರು ಗ್ರಾಮಾಂತರ ಜಿಲ್ಲೆ

ಓದುವ ಅಭಿರುಚಿಯನ್ನು ಮಕ್ಕಳಲ್ಲಿ ಬೆಳೆಸುವ ದೃಷ್ಟಿಯಿಂದ ಪುಸ್ತಕ ಸಂಸ್ಕೃತಿಗೆ ಪೂರಕವಾಗಿ ‘ನೂರು ಶಾಲೆಗಳಿಗೆ ನೂರು ನೂರು ಪುಸ್ತಕ’ ಯೋಜನೆಯಡಿಯಲ್ಲಿ ಬರಹಗಾರರು, ಪ್ರಕಾಶಕರು ಮತ್ತು ಕೆಲವು ಸಂಘ ಸಂಸ್ಥೆಗಳಿಂದ ಮಕ್ಕಳಿಗೆ ಉಪಯುಕ್ತವಾಗುವಂತಹ ಪುಸ್ತಕಗಳನ್ನು ಕೊಡುಗೆಯಾಗಿ ಸಂಗ್ರಹಿಸಿ, ಪ್ರಥಮವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಂದು ನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಆಯ್ಕೆ ಮಾಡಿ, ಬೆಂಗಳೂರಿನ ಎನ್.ಜಿ.ಓ. ಭವನದ ಸಭಾಂಗಣದಲ್ಲಿ ದಿನಾಂಕ: 22- 08-2004ರಂದು ಕರ್ನಾಟಕ ವಿಧಾನ ಪರಿಷತ್ತಿನ ಅಂದಿನ ಸಭಾಪತಿಗಳಾದ ಸನ್ಮಾನ್ಯ ಶ್ರೀ ವಿ.ಆರ್. ಸುದರ್ಶನ್‌ರವರ ಅಧ್ಯಕ್ಷತೆಯಲ್ಲಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವಿಶ್ರಾಂತ ಅಧ್ಯಕ್ಷರು ಹಾಗೂ ಹಿರಿಯ ಲೇಖಕರು ಆದ ಪ್ರೊ. ಬರಗೂರು ರಾಮಚಂದ್ರಪ್ಪ, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಹಾಗೂ ವಿಧಾನ ಪರಿಷತ್ತಿನ ಸದಸ್ಯರಾದ ಡಾ. ಎಲ್. ಹನುಮಂತಯ್ಯನವರು, ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ವೆಂಕಟೇಶಯ್ಯನವರ ಉಪಸ್ಥಿತಿಯಲ್ಲಿ ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಹತ್ತು ಸಾವಿರ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು.

ಧಾರವಾಡ ಜಿಲ್ಲೆ

ದಿನಾಂಕ: 14-08-2005ರಂದು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ನಾಡೋಜ ಡಾ. ಪಾಟೀಲ್ ಪುಟ್ಟಪ್ಪನವರ ಅಧ್ಯಕ್ಷತೆಯಲ್ಲಿ ಧಾರವಾಡ ವಿಭಾಗದ ಶಿಕ್ಷಣ ಆಯುಕ್ತರಾದ ಶ್ರೀ ವಸ್ತ್ರದ, ಹಿರಿಯ ಲೇಖಕಿ ಶ್ರೀಮತಿ ಕಮಲಾ ಹೆಮ್ಮಿಗೆ, ಶ್ರೀ ಶಂಕರ ಹಲಗತ್ತಿ, ಶ್ರೀ ವಿ.ಎಂ. ಪಾಟೀಲ ಇವರ ಉಪಸ್ಥಿತಿಯಲ್ಲಿ ಧಾರವಾಡ ಜಿಲ್ಲೆಯ ಆಯ್ದ ಒಂದು ನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಹತ್ತು ಸಾವಿರ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು.

ಚಾಮರಾಜನಗರ ಜಿಲ್ಲೆ

ದಿನಾಂಕ: 23-09-2006ರಂದು ಗಡಿ ಜಿಲ್ಲೆಯಾದ ಚಾಮರಾಜನಗರ ಜಿಲ್ಲೆಯ 100 ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳನ್ನು ಆಯ್ಕೆ ಮಾಡಿ ವಿಶೇಷವಾಗಿ ಮಕ್ಕಳ ಜ್ಞಾನವಿಕಾಸಕ್ಕೆ ಪೂರಕವಾದ, ಕನ್ನಡ-ಕನ್ನಡ-ಇಂಗ್ಲೀಷ್ ನಿಘಂಟು, ಸ್ಕೂಲ್ ಅಟ್ಲಾಸ್, ವ್ಯಾಕರಣ ಕೈಗನ್ನಡಿ ಇನ್ನು ಮುಂತಾದ ಉಪಯುಕ್ತ ಮಾಹಿತಿಗಳನ್ನೊಳಗೊಂಡಿರುವ, ಸುಮಾರು 4 ಲಕ್ಷ ರೂಪಾಯಿ ಮೌಲ್ಯದ 10,000 ಪುಸ್ತಕಗಳನ್ನು ಉಚಿತವಾಗಿ, ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳು, ಹಿರಿಯ ಸಾಹಿತಿಗಳು ಆದ ನಾಡೋಜ ಡಾ. ದೇ. ಜವರೇಗೌಡರವರ ಅಧ್ಯಕ್ಷತೆಯಲ್ಲಿ, ಸಾಹಿತಿಗಳಾದ ಪ್ರೊ. ಮಲೆಯೂರು ಗುರುಸ್ವಾಮಿ, ಜಿಲ್ಲಾಧಿಕಾರಿಗಳಾದ ಶ್ರೀ ಅನ್ವರ್ ಪಾಷಾ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಜಿ. ಜಯರಾಮ್ ಇವರ ಉಪಸ್ಥಿತಿಯಲ್ಲಿ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು.

ತುಮಕೂರು ಜಿಲ್ಲೆ

ಶಾಲಾ ಮಕ್ಕಳ ಜ್ಞಾನಾರ್ಜನೆಗಾಗಿ ತುಮಕೂರು ಜಿಲ್ಲೆಯ ನೂರು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಉಪಯುಕ್ತವಾದ ಮಕ್ಕಳ ಪುಸ್ತಕಗಳನ್ನು ಸುಮಾರು 4 ಲಕ್ಷ ರೂ. ಮುಖಬೆಲೆಯ 10,000 ಪುಸ್ತಕಗಳನ್ನು ಸಂಗ್ರಹಿಸಿ ಉಚಿತವಾಗಿ ದಿನಾಂಕ: 06-01-2008ರಂದು ವಿದ್ವಾಂಸರು, ಚಿಂತಕರು ಆದ ಪ್ರೊ. ಎಸ್.ಜಿ. ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ, ಸಾಹಿತಿಗಳಾದ ಶ್ರೀ ಜಾಣಗೆರೆ ವೆಂಕಟರಾಮಯ್ಯ ನವರು, ಪ್ರಜಾಪ್ರಗತಿ ಸಂಪಾದಕರಾದ ಶ್ರೀ ಎಸ್. ನಾಗಣ್ಣನವರು ಹಾಗೂ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಡಿ.ಎ. ರಾಜಶೇಖರ್ ಅವರ ಉಪಸ್ಥಿತಿಯಲ್ಲಿ ಪುಸ್ತಕಗಳನ್ನು ವಿತರಿಸಲಾಯಿತು.

ಮೈಸೂರು ಜಿಲ್ಲೆ

ದಿನಾಂಕ: 04-08-2018ರಂದು ಮೈಸೂರು ಜಿಲ್ಲೆಯ 100 ಹಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳ ಜ್ಞಾನವಿಕಸನಕ್ಕಾಗಿ ಮಕ್ಕಳಿಗೆ ಉಪಯುಕ್ತವಾದ 6,54,300/- ರೂಪಾಯಿ ಮೌಲ್ಯದ 10,000 ಪುಸ್ತಕಗಳನ್ನು ಉಚಿತವಾಗಿ ಕರ್ನಾಟಕ ಸರ್ಕಾರದ ಗೌರವಾನ್ವಿತ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಸನ್ಮಾನ್ಯ ಶ್ರೀ ಎನ್. ಮಹೇಶ್, ಮೈಸೂರು ಜಿಲ್ಲಾಧಿಕಾರಿಗಳಾದ ಶ್ರೀ ಅಭಿರಾಮ್ ಜಿ. ಶಂಕರ್, ಹಿರಿಯ ನ್ಯಾಯವಾದಿಗಳಾದ ಡಾ. ಸಿ.ಎಸ್. ದ್ವಾರಕಾನಾಥ್, ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀಮತಿ ಮಮತ ಹಾಗೂ ಹಿರಿಯ ಸಾಹಿತಿಗಳಾದ ಶ್ರೀ ಸಿ.ಪಿ. ಕೃಷ್ಣಕುಮಾರ್ ಇವರ ಉಪಸ್ಥಿತಿಯಲ್ಲಿ ಮೈಸೂರಿನ ರಾಜೇಂದ್ರ ಭವನದಲ್ಲಿ ವಿತರಿಸಲಾಯಿತು.

ಮಂಡ್ಯ ಜಿಲ್ಲೆ

ದಿನಾಂಕ 25-10-2019ರಂದು ಮಂಡ್ಯ ಜಿಲ್ಲೆಯ ಆಯ್ದ 100 ಸರ್ಕಾರಿ ಪ್ರಾಥಮಿಕ ಶಾಲೆಗಳ ಮಕ್ಕಳ ಜ್ಞಾನ ವಿಕಸನಕ್ಕಾಗಿ ಉಪಯುಕ್ತವಾದ ರೂ. 9.45,700/- ಮೌಲ್ಯದ 10,000 ಪುಸ್ತಕಗಳನ್ನು ಉಚಿತವಾಗಿ ಕರ್ನಾಟಕ ಸರ್ಕಾರದ ಗೌರವಾನ್ವಿತ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಶ್ರೀ ಎಸ್. ಸುರೇಶ್ ಕುಮಾರ್ ಅವರ ಅನುಪಸ್ಥಿತಿಯಲ್ಲಿ ಶಾಸಕರಾದ ಶ್ರೀ ಎಂ. ಶ್ರೀನಿವಾಸ್, ಮಾಜಿ ಪರಿಷತ್‌ ಸದಸ್ಯರಾದ ಶ್ರೀ ಹೆಚ್. ಹೊನ್ನಪ್ಪ, ಸಿಇಓ ಶ್ರೀ ಯಾಲಕ್ಕಿಗೌಡ, ಡಿಡಿಪಿಐ ಶ್ರೀ ಆರ್. ರಘುನಂದನ್ ಹಾಗೂ ಸಾಹಿತಿ ಪ್ರೊ. ಜಯಪ್ರಕಾಶ್‌ಗೌಡ ಅವರ ಉಪಸ್ಥಿತಿಯಲ್ಲಿ ಕರ್ನಾಟಕ ಸಂಘದ ಡಾ. ಕೆ.ವಿ. ಶಂಕರೇಗೌಡ ಭವನದ ಸಭಾಂಗಣದಲ್ಲಿ 100 ಶಾಲಾ ಶಿಕ್ಷಕರಿಗೆ ವಿತರಿಸಲಾಯಿತು.

ಶಿವಮೊಗ್ಗ ಜಿಲ್ಲೆ

ದಿನಾಂಕ : 22.09.2022 ರಂದು ಶಿವಮೊಗ್ಗ ಜಿಲ್ಲೆಯ ಆಯ್ದ 100 ಸರ್ಕಾರಿ ಪ್ರಾಥಮಿಕ ಶಾಲೆಗಳ ಮಕ್ಕಳಲ್ಲಿ ಓದುವ ಹವ್ಯಾಸ ರೂಢಿಸಲು ಹಾಗೂ ಜ್ಞಾನವಿಕಸನಕ್ಕಾಗಿ ರೂ 8,63,00.00 ಮೌಲ್ಯದ 10,000 ಮಕ್ಕಳ ಪುಸ್ತಕಗಳನ್ನು ಉಚಿತವಾಗಿ ಜಿಲ್ಲೆಯ ಗೌರವಾನ್ವಿತ ಹಿರಿಯ ಸಾಹಿತಿಗಳಾದ ಶ್ರೀ ನಾ ಡಿಸೋಜ, ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಎಂ.ಸುಂದರರಾಜ್, ಡಿ.ಡಿ.ಪಿ.ಐ ಶ್ರೀ ಪರಮೇಶ್ವರಪ್ಪ, ಪ್ರಕಾಶಕರಾದ ಶ್ರೀ ದಂತಿ, ಪುಸ್ತಕ ಮನೆಯ ಶ್ರೀ ಸುಂದರ್, ಶ್ರೀಮತಿ ಕವಿತಾ ಸಾಗರ್, ಹಾಗೂ ಶ್ರೀಮತಿ ಎಂ.ಆಶಾಲತಾ ಇವರ ಉಪಸ್ಥಿತಿಯಲ್ಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಆಗಮಿಸಿದ್ದ 100 ಶಾಲಾ ಶಿಕ್ಷಕರಿಗೆ ವಿತರಿಸಲಾಯಿತು.

ಚಿಕ್ಕಮಗಳೂರು ಜಿಲ್ಲೆ

ದಿನಾಂಕ : 16.09.2023 ರಂದು ಚಿಕ್ಕಮಗಳೂರು ಜಿಲ್ಲೆಯ ಆಯ್ದ 100 ಸರ್ಕಾರಿ ಪ್ರಾಥಮಿಕ ಶಾಲೆಗಳ ಮಕ್ಕಳಲ್ಲಿ ಪಠ್ಯೇತರ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಲು ಹಾಗೂ ಜ್ಞಾನವಿಕಸನಕ್ಕಾಗಿ ರೂ 7,90,800.00 ಮೌಲ್ಯದ 10,000 ಮಕ್ಕಳ ಪುಸ್ತಕಗಳನ್ನು ಉಚಿತವಾಗಿ ಸಂಘದ ಪರವಾಗಿ ಜಿಲ್ಲೆಯ ಗೌರವಾನ್ವಿತ ಜಿಲ್ಲಾಧಿಕಾರಿಗಳಾದ ಡಾ. ವೀಣಾ ನಾಗರಾಜ್, ಶಾಸಕರಾದ ಶ್ರೀ ಹೆಚ್ ಡಿ ತಮ್ಮಯ್ಯ, ಸಾಹಿತಿಗಳಾದ ಶ್ರೀ ಎಂ ಆರ್ ದತ್ತಾತ್ರಿ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಶ್ರೀ ಜಿ ರಂಗನಾಥಸ್ವಾಮಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಸೂರಿ ಶ್ರೀನಿವಾಸ್ ಇವರ ಉಪಸ್ಥಿತಿಯಲ್ಲಿ ಕುವೆಂಪು ಕಲಾಮಂದಿರದಲ್ಲಿ ಆಗಮಿಸಿದ್ದ 100 ಶಾಲಾ ಶಿಕ್ಷಕರಿಗೆ ವಿತರಿಸಲಾಯಿತು.