+91 94487 53991    +91 86606 36951    barahagararaprakashakarasangha@gmail.com

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ (ರಿ.)

ಕೃತಿಗಳ ಲೋಕಾರ್ಪಣೆ / ಗೌರವಾರ್ಪಣೆ

ನಾಡೋಜ ಡಾ. ಬರಗೂರು ರಾಮಚಂದ್ರಪ್ಪ

ದಿನಾಂಕ: 15-11-2016ನೇ ಮಂಗಳವಾರ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಅಖಿಲ ಭಾರತ 82ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಅವರಿಗೆ ಗೌರವಾರ್ಪಣೆ ಹಾಗೂ ವಿವಿಧ ಬರಹಗಾರರ 10 ಕೃತಿಗಳ ಲೋಕಾರ್ಪಣಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಕರ್ನಾಟಕ ಸರ್ಕಾರದ ಗೌರವಾನ್ವಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶ್ರೀಮತಿ ಉಮಾಶ್ರೀ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ. ಮನು ಬಳಿಗಾರ, ಡಾ. ದೊಡ್ಡರಂಗೇಗೌಡರು, ಡಾ. ಸತೀಶ್ ಕುಮಾರ್ ಹೊಸಮನಿಯವರು ಉಪಸ್ಥಿತರಿದ್ದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರ ಅವರನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಸಂದರ್ಭದಲ್ಲಿ ದಿನಾಂಕ 23.12.2018 ರಂದು ಅವರನ್ನು ಗೌರವಿಸಲಾಯಿತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಟಿ.ಎಸ್. ನಾಗಾಭರಣ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.

85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಹಿರಿಯ ಕವಿ ಡಾ. ಹೆಚ್.ಎಸ್. ವೆಂಕಟೇಶಮೂರ್ತಿಯವರನ್ನು ದಿನಾಂಕ 23-12-2019ರಂದು ಬೆಳಿಗ್ಗೆ 11 ಗಂಟೆಗೆ ಐಬಿಹೆಚ್ ಪ್ರಕಾಶನದಲ್ಲಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ಸಂಘದ ಪದಾಧಿಕಾರಿಗಳು ಗೌರವಾರ್ಪಣೆ ಸಲ್ಲಿಸಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸಂಘದಲ್ಲಿ ಹಲವು ವರ್ಷಗಳು ಗೌರವ ಸಲಹೆಗಾರರಾಗಿದ್ದ ಹಿರಿಯ ಪತ್ರಕರ್ತೆ, ಸಾಹಿತಿ ಡಾ. ವಿಜಯಮ್ಮನವರನ್ನು ದಿನಾಂಕ 23-12-2019ರಂದು ಸಂಜೆ 4 ಗಂಟೆಗೆ ಐಬಿಹೆಚ್ ಪ್ರಕಾಶನದಲ್ಲಿ ಸಂಘದ ಪದಾಧಿಕಾರಿಗಳು ಅವರಿಗೆ ಗೌರವಾರ್ಪಣೆ ಸಲ್ಲಿಸಿ ಅಭಿನಂದಿಸಿದರು.

ದಿನಾಂಕ 16.01.2021 ರಂದು ಬೆಳಿಗ್ಗೆ 11 ಗಂಟೆಗೆ ಐಬಿಹೆಚ್ ಪ್ರಕಾಶನದ ಆವರಣದ ಸಭಾಂಗಣದಲ್ಲಿ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ಪುರಸ್ಕೃತರಾದ ಶ್ರೀ ಹೆಚ್.ಕೆ. ಲಕ್ಷ್ಮೀನಾರಾಯಣ ಅಡಿಗ ಐಬಿಹೆಚ್ ಪ್ರಕಾಶನ ಇವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ವಿವಿಧ ಲೇಖಕರ 7 ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಪದ್ಮಶ್ರೀ ಡಾ. ದೊಡ್ಡರಂಗೇಗೌಡರು ವಹಿಸಿದ್ದರು. ಕವಿ ಡಾ. ಸಿದ್ಧಲಿಂಗಯ್ಯನವರು ಕೃತಿ ಲೋಕಾರ್ಪಣೆ ಮಾಡಿದರು, ಡಾ. ಶರಣು ಹುಲ್ಲೂರು ಪುಸ್ತಕಗಳನ್ನು ಕುರಿತು ಮಾತನಾಡಿದರು.

ವಿಶ್ವಪುಸ್ತಕ ದಿನ ಆಚರಣೆ

2017

ದಿನಾಂಕ: 23-04-2017ರಂದು ಹಂಪಿನಗರದಲ್ಲಿರುವ ಗ್ರಂಥಾಗಣ ಸಭಾಂಗಣದಲ್ಲಿ ‘ವಿಶ್ವ ಪುಸ್ತಕ ದಿನ’, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ನಾಡೋಜ ಪ್ರೊ. ಜಿ. ವೆಂಕಟಸುಬ್ಬಯ್ಯನವರಿಗೆ ಗೌರವಾರ್ಪಣೆ, ಪುಸ್ತಕ ಲೋಕಾರ್ಪಣೆ ಹಾಗೂ ಪ್ರಕಾಶಕರಾದ ಶ್ರೀ ನಿತಿನ್ ಷಾ, ಸಪ್ನ ಬುಕ್ ಹೌಸ್, ಶ್ರೀ ರವೀಂದ್ರ ಗಾಣೇಕರ್, ಸಮಾಜ ಪುಸ್ತಕಾಲಯ, ಧಾರವಾಡ, ಶ್ರೀ ಲಕ್ಷ್ಮೀನಾರಾಯಣ ಅಡಿಗ, ಐಬಿಹೆಚ್ ಪ್ರಕಾಶನ ಹಾಗೂ ಶ್ರೀ ಡಿ.ಎನ್. ಲೋಕಪ್ಪ, ಸಂವಹನ ಪ್ರಕಾಶನ, ಮೈಸೂರು, ಇವರಿಗೆ ವಿಶ್ವಪುಸ್ತಕ ದಿನದ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಡಾ. ದೊಡ್ಡರಂಗೇಗೌಡ, ಪ್ರೊ. ಮಲ್ಲೇಪುರಂ,
ಡಾ. ಎಂ.ಎಸ್. ಮೂರ್ತಿ, ಡಾ. ವಸುಂಧರಾ ಭೂಪತಿ ಹಾಗೂ ಡಾ. ಸತೀಶ್ ಕುಮಾರ ಹೊಸಮನಿ ಆಗಮಿಸಿದ್ದರು.

ಸಂಘದ ಉದ್ಘಾಟನಾ ಸಮಾರಂಭ

ದಿನಾಂಕ: 29-11-2003ರಂದು ಬೆಂಗಳೂರಿನಲ್ಲಿ ಹಿರಿಯ ಸಾಹಿತಿಗಳಾದ ಡಾ. ಸುಮತೀಂದ್ರ ನಾಡಿಗ್, ಪ್ರೊ. ಶಿವಣ್ಣ,  ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಹಾಗೂ ಶ್ರೀ ಟಿ. ಮಲ್ಲೇಶಪ್ಪ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಸಂಘ, ರಾಜ್ಯಾದ್ಯಂತ ಕಾರ್ಯಕ್ರಮಗಳನ್ನು ಸಾಹಿತ್ಯಾಸಕ್ತರ ಬಳಿಗೆ ಕೊಂಡೊಯ್ಯುವುದು ಹಾಗೂ ಜಿಲ್ಲಾವಾರು ಬರಹಗಾರರ ಮತ್ತು ಪ್ರಕಾಶಕರ ಸಂಘಟನೆಯನ್ನು ಬಲಿಷ್ಠಗೊಳಿಸುವ ಗುರಿಯೊಂದಿಗೆ ಸ್ಥಾಪನೆಯಾಯಿತು.
ಕಬ್ಬನ್ ಪಾರ್ಕ್ ನಲ್ಲಿರುವ ಸರ್ಕಾರಿ ನೌಕರರಿಗೆ ಇರುವ ಭವನದ ಸಭಾಂಗಣದಲ್ಲಿಉದ್ಘಾಟನಾ ಸಮಾರಂಭ ನೆರವೇರಿತು. 

ಅಭಿನಂದನಾ ಸಮಾರಂಭ, ಕಲಾಮಂದಿರ, ಮೈಸೂರು

ದಿನಾಂಕ: 20-06-2004ರಂದು ಮೈಸೂರಿನ ಕಲಾಮಂದಿರದಲ್ಲಿ ವಿಶ್ರಾಂತ ಉಪಕುಲಪತಿಗಳಾದ ಪ್ರೊ. ಹೆಚ್.ಜೆ. ಲಕ್ಕಪ್ಪಗೌಡ ಅವರ ಅಧ್ಯಕ್ಷತೆಯಲ್ಲಿ ಡಾ. ಶಿವರಾಮ ಕಾಡನಕುಪ್ಪೆ, ಶ್ರೀ ಮಾನಸ ಇವರ ಉಪಸ್ಥಿತಿಯಲ್ಲಿ ಉತ್ತಮ ಪ್ರಕಾಶನ ಪ್ರಶಸ್ತಿ ಪಡೆದ ಸಂವಹನ ಪ್ರಕಾಶನದ ಶ್ರೀ ಡಿ.ಎನ್. ಲೋಕಪ್ಪನವರಿಗೆ ಅಭಿನಂದನಾ ಸಮಾರಂಭವನ್ನು ನಡೆಸಲಾಯಿತು.

ಕುವೆಂಪು ಜನ್ಮಶತಮಾನೋತ್ಸವ - ಹಾಸನ

ದಿನಾಂಕ: 08-08-2004ರಂದು ಹಾಸನದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ ಹಾಗೂ ಲೇಖಕಾ ಸಾಹಿತ್ಯ ವೇದಿಕೆ ಸಂಘದ ಆಶ್ರಯದಲ್ಲಿ ‘ಕುವೆಂಪು ಜನ್ಮ ಶತಮಾನೋತ್ಸವ ಸಮಾರಂಭವನ್ನು ಪುಸ್ತಕ ಬಿಡುಗಡೆ, ಕುವೆಂಪು ಗೀತಗಾಯನ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡಂತೆ, ಪ್ರೊ. ತೀ.ನಂ. ಶಂಕರನಾರಾಯಣ ಇವರ ಅಧ್ಯಕ್ಷತೆಯಲ್ಲಿ ಶ್ರೀಮತಿ ಶೈಲಜಾ ಸುರೇಶ್, ಶ್ರೀ ಹೆಚ್.ಬಿ. ಮದನಗೌಡ, ಡಾ. ಹೆಚ್.ಎಲ್. ಮಲ್ಲೇಶಗೌಡ, ಶ್ರೀ ಕ್ಷಿತಿಜ ಬೀದರ್ ಇವರ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ
ನಡೆಸಲಾಯಿತು.

ಕೃತಿ ಲೋಕಾರ್ಪಣೆ ಬೆಂಗಳೂರು

ದಿನಾಂಕ: 04-07-2005ರಂದು ಬೆಂಗಳೂರಿನ ಗ್ರಂಥಾಂಗಣದಲ್ಲಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರೊ. ಚಂದ್ರಶೇಖರ ಪಾಟೀಲ್, ಹಿರಿಯ ಸಾಹಿತಿಗಳಾದ ಡಾ. ಸಾ.ಶಿ. ಮರುಳಯ್ಯ ಹಾಗೂ ಶ್ರೀ ಪಿ.ವಿ. ರಾಜೇಂದ್ರಕುಮಾರ್ ಅವರಿಂದ ಗೀತಾಂಜಲಿ ಪಬ್ಲಿಕೇಷನ್ಸ್ ಪ್ರಕಟಿಸಿರುವ ‘ಡಾ. ಎಸ್.ಆರ್. ಗುಂಜಾಳರ ಜೀವನ ಸಾಧನೆ’ ಪುಸ್ತಕ ಬಿಡುಗಡೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಡಾ. ಎಸ್.ಆರ್. ಗುಂಜಾಳ್ ದಂಪತಿಗಳನ್ನು ಸನ್ಮಾನಿಸಲಾಯಿತು.

ಕೃತಿ ಲೋಕಾರ್ಪಣೆ – ಮಂಡ್ಯ

ಮಂಡ್ಯ ಜಿಲ್ಲಾ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ದಿನಾಂಕ: 04-07-2004ರಂದು ಅಂದಿನ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರೊ. ಜಯಪ್ರಕಾಶಗೌಡ, ಹಿರಿಯ ಲೇಖಕರಾದ ಪ್ರೊ. ಹೆಚ್.ಎಲ್. ಕೇಶವಮೂರ್ತಿ ಶ್ರೀ ಹೆಚ್.ಎಸ್. ಮುದ್ದೇಗೌಡ ಇವರಿಂದ ಲೇಖಕ ಶ್ರೀ ಕೆ.ಪಿ. ಸ್ವಾಮಿಯವರ ಮೂರು ನಾಟಕಗಳನ್ನು ಭಾಗ್ಯಲಕ್ಷ್ಮಿ ಪ್ರಕಾಶನ ಹಾಗೂ ಮಂಡ್ಯ ಜಿಲ್ಲಾ ಸಾಹಿತ್ಯ ಪರಿಷತ್ತಿನ ಸಹಯೋಗದೊಡನೆ
ಬಿಡುಗಡೆ ಮಾಡಲಾಯಿತು.

ಕೃತಿ ಲೋಕಾರ್ಪಣೆ ಬೆಂಗಳೂರು

ದಿನಾಂಕ: 09-12-2017ನೇ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಕ್ಷರ ಮಂಟಪ’ ಪ್ರಕಟಿಸಿದ ಮೂರು ಪುಸ್ತಕಗಳನ್ನು ಸಂಘದ ಸಹಯೋಗದೊಡನೆ ಲೋಕಾರ್ಪಣೆ ಮಾಡಲಾಯಿತು. ಪುಸ್ತಕಗಳ ಲೇಖಕರಾದ ಶ್ರೀ ಹೀ.ಚಿ. ಶಾಂತವೀರಯ್ಯ, ಶ್ರೀ ಶ್ರೀ ಶ್ರೀ ಶಿವರುದ್ರ ಮಹಾಸ್ವಾಮಿಯವರು, ಬೇಲಿಮಠ, ನಾಡೋಜ ಡಾ. ಚಿದಾನಂದಮೂರ್ತಿ, ಡಾ. ಮಲ್ಲೇಪುರಂ ಜಿ. ವೆಂಕಟೇಶ್ ಉಪಸ್ಥಿತರಿದ್ದರು.

ಕೃತಿ ಲೋಕಾರ್ಪಣೆ ಬೆಂಗಳೂರು

ದಿನಾಂಕ: 24-06-2018ನೇ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ‘ಸೃಷ್ಟಿ ಪಬ್ಲಿಕೇಷನ್ಸ್’ ಪ್ರಕಟಿಸಿದ ಡಾ. ಕೆ.ಎಸ್. ವೈಶಾಲಿಯವರ ಕೃತಿ ‘ಹಿಮ’ ಸಂಘದ ಸಹಯೋಗದೊಡನೆ ಲೋಕಾರ್ಪಣೆ ಮಾಡಲಾಯಿತು. ಪ್ರೊ. ರಾಜೇಂದ್ರ ಚೆನ್ನಿ, ಶ್ರೀ ಟಿ.ಪಿ. ಅಶೋಕ್, ಡಾ. ಎಂ.ಎಸ್. ಮೂರ್ತಿ ಹಾಗೂ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದರು.

ಉದಯೋನ್ಮುಖ ಬರಹಗಾರರ ಕೃತಿಗಳ ಲೋಕಾರ್ಪಣೆ

ಉದಯೋನ್ಮುಖ ಬರಹಗಾರರನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿ ಪ್ರೋತ್ಸಾಹಿಸುವ ಸಲುವಾಗಿ, 2004ರಲ್ಲಿ ಶಿವಮೊಗ್ಗದ ಶ್ರೀ ಮುಟ್ಟುಪ್ಪೆ ಪರಶುರಾಂ ಅವರ “ಜಪ್ತಿ”, ಬೆಂಗಳೂರಿನ ಶ್ರೀ ಬಿ.ಆರ್. ಸತ್ಯನಾರಾಯಣ ಇವರ “ಮುಡಿ” ಕಥಾಸಂಕಲನಗಳು. ಕಾರವಾರದ ಶ್ರೀ ಲಿಂಗದಹಳ್ಳಿ ಹಾಲಪ್ಪನವರ “ಒಂಟಿ ಹಕ್ಕಿಯ ಹಾವ-ಭಾವ” ಕವನ ಸಂಕಲನ. ಉತ್ತರ ಕನ್ನಡದ ಶ್ರೀ ಮನೋಹರ ಜನ್ನುರವರ “ಚುಕ್ಕಿಯ ಚಿತ್ತಾರ”, ಉಡುಪಿಯ ಶ್ರೀ ಆಲೋನ್ಸಸ್ ಡಿಸೋಜರವರ “ಕಿನ್ನರಿ” ಮಕ್ಕಳ ಸಾಹಿತ್ಯ ಉಡುಪಿಯ ಶ್ರೀ ಟಿ. ಹಿರಿಯಣ್ಣ ಶೆಟ್ಟಿಗಾರ್‌ರವರ ಅರ್ಥಸಹಿತ ಯಕ್ಷಗಾನ ಕಿತ್ತೂರು ರಾಣಿ ಚೆನ್ನಮ್ಮ”, ಧಾರವಾಡದ ಶ್ರೀ ಎ. ಶರಣು ಹುಲ್ಲೂರ ಇವರ ನಾಟಕ “ಮಲ್ಲಿಗೆ” ಮತ್ತು ಮಂಗಳೂರಿನ ಶ್ರೀಮತಿ ಸುಮತಿ ಪಾಂಗಾಳರವರ “ವಿಜ್ಞಾನ ಲೇಖನಗಳು” ಈ ಎಂಟು ಕೃತಿಗಳನ್ನು ಸಂಘವು ಪ್ರಕಟಿಸಿ ಲೋಕಾರ್ಪಣೆಗೊಳಿಸಿತು.

ವಿಶ್ವ ಪುಸ್ತಕ ದಿನಾಚರಣೆ - 2023

ಬೆಂಗಳೂರಿನ ಎನ್. ಆರ್. ಕಾಲೋನಿಯಲ್ಲಿರುವ ಬಿ. ಎಂ. ಶ್ರೀ ಪ್ರತಿಷ್ಠಾನದ ಸಭಾಂಗಣದಲ್ಲಿ ದಿನಾಂಕ: 24.04.2023 ರಂದು ವಿಶ್ವ ಪುಸ್ತಕ ದಿನಾಚರಣೆ ಯನ್ನು ಡಾ. ಸಿ ಸೋಮಶೇಖರ್, ಐ. ಎ. ಎಸ್.  ಶ್ರೀ ಗಿರೀಶ್ ರಾವ್ ಹತ್ವಾರ್  (ಜೋಗಿ) ಹಾಗೂ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಆಚರಿಸಲಾಯಿತು. ವಿಶ್ವ ಪುಸ್ತಕ ದಿನದಂದು ಜ್ಞಾನಯೋಗಿ ಪ್ರಕಾಶನದ ಶ್ರೀ ಜ್ಞಾನಯೋಗಿ, ವಿಕ್ರಂ ಪ್ರಕಾಶನದ ಶ್ರೀಮತಿ ನಂದ ಹರಿಪ್ರಸಾದ್, ಕನ್ನಡ ಪರಿಚಾರಕಿ ಶ್ರೀಮತಿ ಶೋಭಾ ಹಾಗೂ ಪುಸ್ತಕ ಪರಿಚಾರಕ ಶ್ರೀ ರಾಮಚಂದ್ರಯ್ಯ ಇವರನ್ನು ಸನ್ಮಾನಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ವಿಶ್ವ ಪುಸ್ತಕ ದಿನಾಚರಣೆ - 2024

ದಿನಾಂಕ: ೨೩-೦೪-೨೦೨೪ರಂದು ಶೇಷಾದ್ರಿಪುರಂ ದತ್ತಿ ಸಭಾಂಗಣದಲ್ಲಿ ನಿಡಸಾಲೆ ಪುಟ್ಟಸ್ವಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆಯಿತು, ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪನವರು ಪುಸ್ತಕ ಪರಿಚಾರಕರಿಗೆ ಸನ್ಮಾನ ಹಾಗೂ ೨೦ನೇ ವರ್ಷದ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಿಗೆ ಗೌರವಾರ್ಪಣೆ ನೆರವೇರಿಸಿದರು, ನಾಡೋಜ ಡಾ.ವೂಡೇ ಪಿ.ಕೃಷ್ಣ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಕಾಲೇಜಿನ ಶಂಕರ್, ಗೀತಾ, ಅರ್ಚನಾ ತೇಜಸ್ವಿ, ಕಾರ್ಯದರ್ಶಿ ಆರ್. ದೊಡ್ಡೆಗೌಡರವರು ಉಪಸ್ಥಿತರಿದ್ದರು.