+91 94487 53991    +91 86606 36951    barahagararaprakashakarasangha@gmail.com

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ (ರಿ.)

ಸಂಘದ ಧ್ಯೇಯೋದ್ದೇಶಗಳು

  1. ಉದಯೋನ್ಮುಖ ಬರಹಗಾರರ ಉತ್ತಮ ಕೃತಿಗಳನ್ನು ಆಯ್ಕೆ ಮಾಡಿ ಪ್ರಕಟಿಸುವುದು.
  2. ಪ್ರತಿ ವರ್ಷ ಒಂದು ಜಿಲ್ಲೆಯ ಆಯ್ದ ಒಂದು ನೂರು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ “ನೂರು ಶಾಲೆಗಳಿಗೆ ನೂರು ನೂರು ಉಚಿತ ಪುಸ್ತಕ ವಿತರಣಾ ಯೋಜನೆ” ಯಡಿ ಪಠ್ಯೇತರ ಪುಸ್ತಕಗಳನ್ನು ದಾನಿಗಳಿಂದ ಸಂಗ್ರಹಿಸಿ ವಿತರಿಸಿ, ಮಕ್ಕಳಲ್ಲಿ ‘ಪುಸ್ತಕ ಪ್ರೀತಿ’ಯನ್ನು ಬೆಳೆಸಲು ಸಹಕಾರಿಯಾಗುವುದು.
  3. ‘ಸಾಹಿತ್ಯ ರತ್ನ’, ‘ಯುವ ಸಾಹಿತ್ಯ ರತ್ನ’ ‘ಪುಸ್ತಕ ರತ್ನ’, ‘ಮುದ್ರಣ ರತ್ನ’ ಪ್ರಶಸ್ತಿಗಳಿಗೆ ಆಯ್ಕೆ ಮಾಡಿ ಪ್ರತಿವರ್ಷ ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸುವುದು.
  4. ಶುಭ ಸಮಾರಂಭಗಳಲ್ಲಿ ಬಳುವಳಿಯಾಗಿ ಪುಸ್ತಕಗಳನ್ನು ನೀಡುವಂತೆ ಜನತೆಯನ್ನು ಪ್ರೇರೇಪಿಸಿ ಈ ಮೂಲಕ ‘ಪುಸ್ತಕ ಸಂಸ್ಕೃತಿ’ಗೆ ಒತ್ತು ಕೊಡುವುದು
  5. ಪುಸ್ತಕ ಪ್ರದರ್ಶನ, ವಿಚಾರ ಸಂಕಿರಣ, ಕಮ್ಮಟಗಳು, ಪುಸ್ತಕ ಬಿಡುಗಡೆ ಕಾರ್ಯಕ್ರಮಗಳನ್ನು ಏರ್ಪಡಿಸುವುದು.

         6. ಪ್ರೌಢಶಾಲಾ ಮಕ್ಕಳಿಗಾಗಿ ಕತೆ ಬರೆಯುವ ಸ್ಪರ್ಧೆಗಳನ್ನು ಏರ್ಪಡಿಸಿ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನ, ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸುವ                     ಜೊತೆ ಉತ್ತಮ ಕಥೆಗಳನ್ನು ಆಯ್ಕೆ ಮಾಡಿ ಮಕ್ಕಳ ಕಥಾಸಂಕಲನಗಳನ್ನು ಪ್ರಕಟಿಸುವುದು.

         7. ಗ್ರಂಥಾಲಯಗಳು ಹಾಗೂ ಪುಸ್ತಕೋದ್ಯಮದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವುದು ಕನ್ನಡ ಸಾರಸ್ವತಲೋಕಕ್ಕೆ ಸಹಕಾರಿಯಾಗುವಂತಹ                                        ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

         8. ಪುಸ್ತಕೋದ್ಯಮದ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವುದು.

         9. ಬರಹಗಾರ-ಪ್ರಕಾಶಕ-ಓದುಗ-ಗ್ರಂಥಾಲಯ (ಸರ್ಕಾರ) ಇವರ ಜೊತೆಯಲ್ಲಿ ಸಾಮರಸ್ಯದಿಂದ ಸೇತುವೆಯಾಗಿ ನಿಂತು ಸರ್ವತೋಮುಖ                                                                 ಅಭಿವೃದ್ಧಿಗಾಗಿ ಶ್ರಮಿಸುವುದು.